ಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ
ಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಬಸವಕಲ್ಯಾಣ ನಾಡಿನ ಸಂತ , ನಡೆದಾಡುವ ದೇವರು , ಅತ್ಯಂತ ಸರಳ ಜೀವಿಗಳು ,ಸಿದ್ದಾಂತ ಸಿಖಾಮಣಿ ಮತ್ತು ವಚನ ಸಾಹಿತ್ಯ ಭೋದನೆ ಗೈಯುತ್ತಿರುವ ಬಸವಕಲ್ಯಾಣ ಗವಿಮಠದ ಪೀಠಾಧಿಪತಿಗಳಾದ ಶಿವಶರಣರ ದೀಕ್ಷಾ ಸ್ಥಳ ಶ್ರೇಷ್ಠ ಶ್ರೀ ಪ್ರಶಸ್ತಿ ಪುರಸ್ಕೃತರು ಪರಮ ಪೂಜ್ಯ ಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪರಿಚಯ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ, ಗುರುಸ್ಥಲ ಮಠವಾಗಿದ್ದು ಅದರಲ್ಲಿ ಗವಿಮಠವು ಪುತ್ರವರ್ಗದ ಮಠವಾಗಿದ್ದು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಈ ಮಠಕ್ಕೆ ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾಂರ್ದರನ್ನು ಚಿಕ್ಕ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿ ನೇಮಿಸಲಾಯಿತು. ಇವರು, ಹಲವಾರು ಭಕ್ತಾದಿಗಳಿಗೆ ಒಳ್ಳೆಯ ಮಾರ್ಗ ದರ್ಶನ ನೀಡುತ್ತ, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಬರುತ್ತಿದ್ದಾರೆ. ಇವರು 1986 ಸೆಪ್ಟೆಂಬರ್ 28 ರಂದು ಚೆನ್ನಮ್ಮ, ರುದ್ರಮುನಿ ದಂಪತಿಗಳ ಉದರದಲ್ಲಿ ಜನಿಸಿದರು. ಇವರ ಜನ್ಮ ನಾಮ ಇವರಿಗೆ ದೀಪಯ್ಯ ಎಂದು ನಾಮಕರಣ ಮಾಡಲಾಯಿತು. ದೀಪಯ್ಯ ಅವರ ಪ್ರಾಥಮಿಕ ಶಿಕ್ಕಣ, ಕಲಬುರಗಿಯ ಮಹಾಜನ ಮಠದಲ್ಲಿ ಮುಗಿಸಿ, ಪ್ರೌಢ ಶಿಕ್ಷಣ " ಮಾಯಾ ಬಾಲ್ ವಿದ್ಯಾ ಮಂದಿರ” ಕಲಬುರಗಿ (ಗುಲಬರ್ಗಾ)ಯಲ್ಲಿ ವಿದ್ಯಾಭ್ಯಾಸ ಮಾಡಿದರು. ಘನಲಿಂಗ ರುದ್ರಮುನಿ ಗವಿ ಮಠಕ್ಕೆ “ಮರಿದೇವ ಗುಡ್ಡ"ಎಂತಲೂ ಕರೆಯುತ್ತಾರೆ. ಬಹುಶಃ ಮಠದ ಪರಂಪರೆಯಲ್ಲಿ ಮರಿದೇವರೆಂಬುವರು ಇದ್ದಿರಬೇಕೆಂದು ತಿಳಿಯುತ್ತದೆ. ಆದ್ದರಿಂದ ದಿನಾಂಕ: 11-09-1997ರಂದು ಸಾವಿರಾರು ಜನಸ್ತೋಮದಲ್ಲಿ ಶ್ರೀ ಮದ್ ರಂಭಾಪುರಿ, ಶ್ರೀಮದ್ ಕೇದಾರ ಜಗದ್ಗುರುಗಳ ನೇತೃತ್ವದಲ್ಲಿ, “ದೀಪಯ್ಯ” ಅವರಿಗೆ ಶ್ರೀ ಪಂಚಾಕ್ಷರಿ ಮರಿದೇವರೆಂದು 11ನೇ ವಯಸ್ಸಿಗೆ ಮರು ನಾಮಕರಣ ಮಾಡಲಾಯಿತು. ಮುಂದೆ ರಂಭಾಪುರಿ ಪೀಠದಲ್ಲಿ ವೈದಿಕ ಅಭ್ಯಾಸ ಮಾಡಲಾಯಿತು. ತದನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊನ್ನಳಿಯ ಹಿರೇಕಲ್ಮಠದಲ್ಲಿ ಪಿ.ಯು.ಸಿ ಯಲ್ಲಿ ಪ್ರವೇಶ ಪಡೆದು ಸಂಸ್ಕೃತದಲ್ಲಿ ಕಾವ್ಯ ಮಾಡಿರುತ್ತಾರೆ. ನಂತರ ರಾಣೆಬೆನ್ನೂರಿನ ವಾಗೀಶ ಪಂಡಿತ ರಾಧ್ಯ ಧಾರ್ಮಿಕ ಪಾಠ ಶಾಲೆಯಲ್ಲಿ ಜೋತಿಷ್ಯ ಶಾಸ್ತ್ರ ಮಾಡಿ, ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. ಹಾಗೆ ಮೈಸೂರುನಲ್ಲಿಯೇ ಸಂಸ್ಕೃತದಲ್ಲಿ ಸಾಹಿತ್ಯ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಶ್ರೀಗಳು ಶ್ರೀ ಭಾಷಾ ಜ್ಞಾನವನ್ನುಳ್ಳುವರಾಗಿದ್ದಾರೆ. ಒಮ್ಮೆ ಜಗದ್ಗುರುಗಳೇ ಫೋನ್ ಮಾಡಿ ಬರುವ ಸೆಪ್ಟೆಂಬರ್ 28ರಂದು ನಾನು ಬರುವೆ ನಂದು ಸೂಚಿಸಿದರು. ದಿನಾ0ಕ ಪ0ಚಾಕ್ಷರಿ ಮರಿದೇವರು(ದೀಪಯ್ಯ)ನವರು ಹುಟ್ಟಿರುವ ದಿನಾಂಕವನ್ನೇ ನೇಮಿಸಿರುವದು ತಿಳಿದು ಎಲ್ಲರೂ ಆಶ್ಚರ್ಯಗೊಂಡರು. ಹೀಗಾಗಿ ಜನ್ಮದಿನದಂದೇ ಪಟ್ಟಾಭಿಷೇಕವಾದವರೆಂದರೆ ಮುಂದೆ ಈ ವ್ಯಕ್ತಿ ಮಹಾನ್ ವ್ಯಕ್ತಿ ಆಗಬಲ್ಲರೆಂಬ ಜನಾಭಿಪ್ರಾಯವಾಗಿದೆ. ಪೂಜ್ಯಶ್ರೀ ಷ.ಬ್ರ. ಡಾ.ಅಭಿನವ ಘನಲಿಂಗರುದ್ರಮುನಿ ಶಿವಾಚಾರ್ಯರು ಹುಟ್ಟಿದ್ದು 1986 ಸೆಪ್ಟೆಂಬರ್ 28 ರಂದು ಪಟ್ಟಾಧಿಕಾರವಾದದ್ದು 2005 ಸೆಪ್ಟೆಂಬರ್ 28 ರಂದು. ಇವರು ಧರ್ಮ ಚಿಂತಕರು, ಲಿಂಗ ಪೂಜೆ ನಿಷ್ಕರು, ಯೋಗಾಸನ, ಪ್ರಾರ್ಥನಾ, ಜಪ-ತಪ, ಅನುಷ್ಠಾನಗಳ ಇವರ ದಿನ ನಿತ್ಯದ ಚಟುವಟಿಕೆಗಳಾಗಿವೆ. ಪಟ್ಟಾಧಿಕಾರದ ನಂತರ ಗವಿಮಠದಲ್ಲಿ 11 ದಿವಸ ಗವಿಮಠದಲ್ಲಿ ಅನುಷ್ಠಾನಕ್ಕೆ ಕುಳಿತಿರುವ ಅಭಿನವಶ್ರೀಗಳು ಹಾಗೂ 2014 ಶ್ರಾವಣ ಮಾಸದಲ್ಲಿ 41 ದಿನಗಳ ಪರ್ಯಂತರ ಮೌನಾ ಅನುಷ್ಠಾನ ಗವಿಮಠದಲ್ಲಿ ಮಾಡಿದ್ದಾರೆ. ಪ್ರವಚನ, ಆಶೀರ್ವಚನ, ಧರ್ಮಸಭೆ, ಬಿನ್ನಾಹ, ಗ್ರಹಪ್ರವೇಶ, ಮದುವೆ ಸಮಾರಂಭ, ಶೈಕ್ಷಣಿಕ ಸಂಸ್ಕೃತಿಕ ಸಾಮಾಜಿಕ ವಿವಿಧ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮುಂತಾದವುಗಳಲ್ಲಿ ಅವರ ಮಾತು ವಾಕ್ ಚಾತುರ, ಸಂದರ್ಭಕ್ಕೆ ತಕ್ಕಂತೆ ಅದ್ಭುತ ಮಾತುಗಳಾಡುತ್ತ ಜನರ ಮನದಲ್ಲಿ ಮಹತ್ವದ ಪೂಜ್ಯ ಭಾವಗಳನ್ನಾಗಿದ್ದಾರೆ. ಮತ್ತು ಪ್ರತಿ ವರ್ಷ ಮಾರ್ಚ್ನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವ ಬಹಳ ವಿಜೃಂಬಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ಬಸವಕಲ್ಯಾಣದಿಂದ ಗವಿಮಠದವರೆಗೆ ಪೀಠಾಧಿಪತಿಗಳ ಭವ್ಯ ಮೆರವಣಿಗೆ ನಡೆಯುತ್ತದೆ. ಹಲವಾರು ವೈಚಾರಿಕ, ಧಾರ್ಮಿಕ ಗೋಷ್ಠಿಗಳು ನಡೆಯುತ್ತವೆ. ಈ ಅದ್ಭುತವಾದ ಸಮಾರಂಭಗಳಲ್ಲಿ ಪ್ರತಿ ವರ್ಷ ಒಬ್ಬರನ್ನು ಆಯ್ಕೆ ಮಾಡಿ “ಅಭಿನವ ಘನಲಿಂಗ ಶ್ರೀ” ಪ್ರಶಸ್ತಿ ನೀಡಿ ಗೌರವಿಸುತ್ತಾರ ಮಠದ ಪಕ್ಕದಲ್ಲಿಯೇ ಪ ತ್ರಿವನದಲಿ ಹಲವಾರು ತರಹದ ಗಿಡಮೂಲಿಕೆಗಳಿವೆ. 12ನೇ ಶತಮಾನದ ರೇವಣಸಿದ್ದರು. ಮತ್ತು ಇವರ ಮಗ ರುದ್ರಮುನಿ ಮಹಾನ ಪವಾಡ ಪುರುಷರು. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಗಿಡಮೂಲಿಕೆಗಳಿಂದ ಹಲವಾರು ಜನರಿಗೆ ಪವಾಡಗಳಿಂದ ಅವರನ್ನು ಗುಣಮುಖಮಾಡಿದ್ದಾರೆ. ಅವರಂತೆ ಇಂದಿನ ನೂತನವಾಗಿ ನಾಮಕರಣ ಮಾಡಲಾದ ಶ್ರೀ ಷ.ಬ್ರ. ಪೂಜ್ಯಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಅವರಂತೆ ಇವರಿಗೂ ಕೂಡ ಇನ್ನಷ್ಟು ಪವಾಡಗಳು ಮಾಡುವ ದೈವಶಕ್ತಿ ಕೊಡಲೆಂದು ಆ ದೇವರಲ್ಲಿ ಸಕಲ ಸದ್ಭಕ್ತರ ನಮ್ಮನಿಮ್ಮೆಲ್ಲರವತಿಯಿಂದ ಪ್ರಾರ್ಥನೆ. ಪೂಜ್ಯರ ಇಂಥಹ ಹತ್ತು ಹಲವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಲ್ಯಾಣ ಕಾಯಕ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ಆಧ್ಯಾತ್ಮ ವಿಶ್ವವಿದ್ಯಾಲಯವು ದಿನಾಂಕ : 25/02/2021 ಗುರುವಾರದಂದು ಪೂಜ್ಯ ಶ್ರೀ ಷ. ಬ್ರ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಮಾಡಿ ಗೌರವಿಸಲಾಗಿದೆ. ಪೂಜ್ಯಶ್ರೀ ಷ.ಬ್ರಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಸಂದ ಗೌರವ ಪ್ರಶಸ್ತಿಗಳು 1) ಶ್ರೀಮದ್ ರಂಭಾಪುರಿ ಪೀಠದವತಿಯಿಂದ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರಿಂದ ಪೂಜ್ಯಶ್ರೀಗಳಿಗೆ “ಶಿವಶರಣರದೀಕ್ಷಾಸ್ಥಳ ಶ್ರೇಷ್ಠ ಶ್ರೀ' ಪ್ರಶಸ್ತಿ - 29-03-2013 2) “ಕರ್ನಾಟಕ ದರ್ಶನ' ಮಾಸ ಪತ್ರಿಕೆ ಹುಬ್ಬಳಿ ಅವರಿಂದ ರಾಷ್ಟ್ರೀಯ ವಿಶ್ವಜ್ಞಾನಿ' ಪ್ರಶಸ್ತಿ - 31-12-2018 3) ಬೆಂಗಳೂರಿನ ಆಧ್ಯಾತ್ಮ ವಿಶ್ವವಿದ್ಯಾಲಯ ಅವರಿಂದ “ಗೌರವ ಡಾಕ್ಟರೇಟ್” - 25/02/2021